FLASH NEW

"/.ಉಪ ಜಿಲ್ಲಾ ಯುವಜನೋತ್ಸವದ ತಯಾರಿಯಲ್ಲಿ ಪುಟಾಣಿಗಳು.href="https://www.education.kerala.gov.in">.......വിദ്യാഭ്യാസ വാര്‍ത്തകള്‍.....

Friday 19 September 2014

                                                                            

   ಶಾಲೆಯಲ್ಲಿ ಓಣಂ ಹಬ್ಬ                                  

                   ಕೇರಳದ ನಾಡ ಹಬ್ಬ ಓಣಂ. ಕೇರಳೀಯರಲ್ಲರೂ ಜಾತಿ, ಮತ, ಬೇಧವಿಲ್ಲದೆ  ಆಚರಿಸುವ  ಓಣಂ  ಹಬ್ಬದ  ಚಾರಿತ್ರಿಕ  ಹಿನ್ನೆಲೆಯನ್ನು ಮರೆಯದೆ,  ಪುಟಾಣಿಗಳು, ಶಿಕ್ಷಕರು, ಹೆತ್ತವರು, ಊರವರು ಎಲ್ಲರೂ   ಸೇರಿ ನಮ್ಮ ಶಾಲೆಯಲ್ಲೂ ಓಣಂ ಆಚರಿಸಲಾಯಿತು.  ಓಣಂ ಆಟಗಳಾದ  ಸಂಗೀತ ಕುರ್ಚಿ,

 

ಹಗ್ಗ ಜಗ್ಗಾಟ,ಓಣಂ ಹಾಡುಗಳಿಗೆ  ಶ್ರೀಮತಿ  ಶ್ರೀಜ ಟೀಚರ್,ಅಮೃತ್    ಲಾಲ್ ಸರ್,  ಮೋಯಿದ್ದೀನ್  ಸರ್ ನೇತೃತ್ವ  ವಹಿಸಿದರೆ,  ಶ್ರೀಮತಿ ಉಷಾ ಟೀಚರ್, ನಿಷಾ ಟೀಚರ್, ಎಚ್. ಎಂ, ಸುಂದರಿ ಅಕ್ಕ ಔತಣ ತಯಾರಿಯಲ್ಲಿ ಮೇಲ್ನೋಟ ವಹಿಸಿದರು. ಶ್ರೀಮತಿ ಅಮಿತ ಟೀಚರ್, ಎಂ. ಪಿ. ಟಿ. ಅಧ್ಯಕ್ಷೆ ನಮಿತ ರವರ   ನೇತೃತ್ವದಲ್ಲಿಮಕ್ಕಳಸಹಭಾಗಿತ್ವದೊ೦ದಿಗೆ  ಭೀಮಾಕಾರದ ''ಪೂಕ್ಕಳಂ''  ನಿರ್ಮಾಣಗೊ೦ಡಿತು.                                                                                  ಈ ಮಧ್ಯೆ ಹೆಟ್ಟೀಚರ ಆಮಂತ್ರಣ ಸ್ವೀಕರಿಸಿ ಶಾಲೆಗೆ ಆಗಮಿಸಿದ  ಪಂಚಾಯತು  ಅಧ್ಯಕ್ಷರು ಮತ್ತು ಸ್ಥಾಯೀ ಸಮಿತಿ ಅಧ್ಯಕ್ಷೆ  ಓಣಂ ಹಬ್ಬದ  ಶುಭಾಷಯಗಳನ್ನಿತ್ತರು.     .                                                                        ಮಧ್ಯಾಹ್ನ 1.30 ಕ್ಕೆ ಸರಿಯಾಗಿ ಬಾಳೆಲೆಯಲ್ಲಿ ಓಣಂ ಔತಣ ವಿತರಿಸಲಾಯಿತು. ಕೊಡುಗೈದಾನಿಯೂ, ಸ್ವಾತಂತ್ರ್ಯ ಹೋರಾಟಗಾರರೂ  ಆದ ಶ್ರೀಯುತ ಶಂಕರ್ ನಾಯ್ಕರವರು ಮಕ್ಕಳ ಜೊತೆ ಕುಳಿತು ಓಣಂ ಔತಣ ಸ್ವೀಕರಿಸಿ ಶುಭ ಹಾರೈಸಿದ್ದು ಈ ವರ್ಷದ ಓಣಂ ಆಚರಣೆಗೆ ಹೆಚ್ಚಿನ ಮೆರಗನ್ನು ಕೊಟ್ಟಿತು.                                                                               

                                                                  

No comments:

Post a Comment