FLASH NEW

"/.ಉಪ ಜಿಲ್ಲಾ ಯುವಜನೋತ್ಸವದ ತಯಾರಿಯಲ್ಲಿ ಪುಟಾಣಿಗಳು.href="https://www.education.kerala.gov.in">.......വിദ്യാഭ്യാസ വാര്‍ത്തകള്‍.....

About us

GLPS KAVUGOLI
          ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತಿನ ಹತ್ತನೇ ವಾರ್ಡಿನ  ಎರಿಯಾಲ್  ಕೊರುವೈಲು  ಪ್ರದೇಶದಲ್ಲಾಗಿದೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾವುಗೋಳಿ    ಇರುವುದು.ಬ್ಲಾರ್ಕೋಡ್, ಆಝಾದ್ ನಗರ್,ಕುಳಂಗರ,ಬಳ್ಳೀರ್ ಪೂಕ್ಕರ ಮೊದಲಾದವುಗಳು ಇಲ್ಲಿನ ನೆರೆಯ ಪ್ರದೇಶಗಳಾಗಿವೆ. 
                 1927 ರಲ್ಲಿ ಮೊಗ್ರಾಲ್
ಪುತ್ತೂರಿನ ಕೆಲವು ಮಂದಿ ಸಮಾಜ ಸೇವಕರ ಪ್ರಯತ್ನದ ಫಲವಾಗಿ ಕಾವುಗೋಳಿಯಲ್ಲೊ೦ದು ಶಾಲೆಯು ಪ್ರವರ್ತಿಸಲಾರಂಭಿಸಿತು. ಬಾಡಿಗೆ ಕಟ್ಟಡದಲ್ಲಾಗಿತ್ತು ಆರಂಭ.
                 ಸ್ಥಳಾವಕಾಶದ ಲಭ್ಯತೆಗನುಸರಿಸಿ ಶಾಲೆ ಸ್ಥಳದಿಂದ ಸ್ಥಳಕ್ಕೆ ವರ್ಗಾಯಿಸಲ್ಪಡುತಿತ್ತು. ಕ್ರಮೇಣ ಕೊಡುಗೈದಾನಿಯೂ, ಮಾಜಿ ಅಧ್ಯಕ್ಷರೂ ಆದ ಶ್ರೀಯುತ ಶಂಕರ್ ನಾಯ್ಕ್ ರವರು ಉದಾರವಾಗಿ ನೀಡಿದ 17 ಸೆಂಟ್ ಜಾಗದಲ್ಲಾಗಿದೆ ಪ್ರಸ್ತುತ ಶಾಲೆ ಇಂದು ನೆಲೆ ನಿಂತಿರುವುದು. 
                 ಕನ್ನಡ, ಮಲಯಾಳ ಎರಡು ಮಾಧ್ಯಮಗಳನ್ನೊಳಗೊ೦ಡ ಈ ಶಾಲೆಯಲ್ಲಿ 84 ಮಕ್ಕಳು ಕಲಿಯುತ್ತಿದ್ದಾರೆ. ಮುಖ್ಯೋಪಾಧ್ಯಾಯರ ಸಹಿತ ಏಳು ಮಂದಿ ಶಿಕ್ಷಕರೂ ಇದ್ದಾರೆ. ಐದು ಕಂಪ್ಯೂಟರ್ ಗಳನ್ನೊಳಗೊ೦ಡ ಉತ್ತಮವಾದ ಕಂಪ್ಯೂಟರ್ ಲ್ಯಾಬೂ, ಸೌಕರ್ಯ ಪ್ರದವಾದ ತರಗತಿ ಕೋಣೆಗಳೂ ಇವೆ. 
                   ಶಿಸು ಸೌಹೃದ ವಿದ್ಯಾಲಯ, ಚಟುವಟಿಕಾಧಾರಿತ  ಶಿಕ್ಷಣ ಜೊತೆಗೆ ಪಾಠ್ಯೇತರ ಚಟಪವಟಿಕೆಗಳು, ದಿನಾಚರಣೆಗಳು,ವಿಭವ ಸಮೃದ್ಧವಾದ ಮಧ್ಯಾಹ್ನದೂಟ ಇವೇ ಮೊದಲಾದ ಚಟುವಟಿಕೆಗಳನ್ನೊಳಗೂಡಿಸಿಕೊ೦ಡು ಕಾವುಗೋಳಿ ಶಾಲೆಯು ಉತ್ತಮ ರೀತಿಯಲ್ಲೇ ಮುನ್ನಡೆಯುತ್ತಿದೆ.

No comments:

Post a Comment